24
1
2
3
v1 ಐದು ದಿನ್ಲ ಐಲಂಕಾ ಮಾಹಯಜಕುದು ಅನನೀಯನ ಸಬೆಯ ಪೆದ್ದೊಲ್ ಕೊಂಚಂಜನರಲಿ ತೆರ್ತುಲ್ಲನೆಂಬ ವಕಿಳುಟಿ ಪೆಲ್ಕನವಚಿ ಪೌಲನ ಪಿನ ದೇಶದಿಪತಿಗೆ ದೂರು ಸೋಪ್ನದು 2 ಪೌಲನನ್ನು ಪೆಲ್ವೇಚಿನೋಪ್ಪುದು ತೆರ್ತುಲ್ಲನು ಆಡ ಪೈನ ತಪ್ಪು ಮೂಪ್ಪುದಕ್ಕೆ ಅರುಮ್ಬಮ್ಸೆಸೆ ಎತ್ತಸೋಪ್ನರು ಮಹಾಷೆರ್ಸ್ತುದು ಪೇಲಿಕ್ಸನೆ ನುವಾ ಮೂಲಾಕಾಂಗ ಮಾಕೆ ಜಾಸ್ತಿ ಸಮಾದನಂ ಉಂಟ್ಮೈಂಚಿ ನೋವ ಮುದ್ರಾಲೋಚನಇಂಚ ಇ ದೇಶದ ಜನಕಿ ನೀ ವೀದನ್ಲು ಯಲ್ಲಾ ಜಾಗುಮು ಸುದಾರನೆಗಳು ಐನ್ದನುಕಿ 3 ನಾಮು ಉಪಕರಮ್ನು ಕ್ರುಥಜ್ನಲು ಒಪ್ಪಿಕೊಂತ್ತಮು 456
4
5
6
4 ದಾನಕಿ ನಾಮು ಮೀಮ್ಮಲ್ಲಿ ಅಕ್ವ ಬೇಸರಮ್ಚೆಸುಂತ್ತಕಿ ಮನ್ಸ್ಲೆಕುಂತ ನೇನು ಸುರಕ್ಷಇಥಮ್ಲ ಸೊಪ್ಪಿನ ಮಾತ್ತಳನ್ನಿ ದಯಮುಚೆಸಿ ಎನಿವೆಚ್ಕೊಲ ಬೇಡ್ಕೊಂತ 5 ಇ ಮನುಶುತ್ನಿ ಹಾನಿಕರಮು ಲೋಕಂಳು ನೀ ಯಹೊದ್ಯಲು ದಂಗೆಯನ್ನಲಿ ಲೆಪಿಸೆ ನಜರೆಥಿನ ದರ್ಮಮು ವೀರೊದಲ ನಾಯಕ ಅಂದಿಕೊಂದೆಮು 6 ಎದ್ಕಕುಂದ ಇದು ದೇವಾಲಯವನ್ನಿ ಸೇದ್ಪಯಲಾನಿ ಪ್ರಯಥಮು ಸೆಸಾರು ದನ್ನಿಚಿ ಮೆಮು ವೀಲಿ ಕೊತ್ತ್ನಮು
7
8
9
ಸಹಸ್ರಾಧಿಪತಿಯಾದ ಲೂಸ್ಯನು ಮಧ್ಯೆ ಬಂದು ಬಲವಂತಮಾಡಿ ಅವನನ್ನು ನಮ್ಮ ಕೈಯಿಂದ ಬಿಡಿಸಿಕೊಂಡು ಹೋದನು,) 8ಇವನನ್ನು ನೀನೇ ವಿಚಾರಿಸಿದರೆ ನಾವು ಇವನ ಮೇಲೆ ಹೊರಿಸುವ ಈ ತಪ್ಪುಗಳೆಲ್ಲಾ ನಿಜವೋ ಸುಳ್ಳೋ ಇವನಿಂದಲೇ ತಿಳಿದುಕೊಳ್ಳಬಹುದು>> ಎಂದು ಹೇಳಿದನು. 9ಆಗ ಯೆಹೂದ್ಯರು ಈ ಸಂಗತಿಗಳು ನಿಜವಾಗಿವೆ ಎಂದು ಹೇಳಿ ತಾವೂ ಆ ದೋಷಾರೋಪಣೆ ಮಾಡುವವರೊಂದಿಗೆ ಸೇರಿಕೊಂಡರು.
10
11
12
13
ದೇಶಾಧಿಪತಿಯು ಪೌಲನಿಗೆ - ನೀನು ಮಾತನಾಡಬಹುದೆಂದು ಸನ್ನೆಮಾಡಲು ಅವನು ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ - <<ನೀನು ಅನೇಕ ವರುಷಗಳಿಂದ ಈ ದೇಶದ ಜನರಿಗೆ ನ್ಯಾಯಾಧಿಪತಿಯಾಗಿರುತ್ತೀ ಎಂದು ತಿಳಿದು ನಾನು ಧೈರ್ಯವಾಗಿ ಪ್ರತಿವಾದ ಮಾಡುತ್ತಿದ್ದೇನೆ. 11ನಾನು ದೇವಾರಾಧನೆಮಾಡುವುದಕ್ಕೆ ಯೆರೂಸಲೇಮಿಗೆ ಹೋಗಿ ಹನ್ನೆರಡು ದಿನಗಳು ಮಾತ್ರವಾಗಿದೆಯೆಂದು ನೀನು ತಿಳಿದುಕೊಳ್ಳಬಹುದು. 12ಅಲ್ಲಿ ದೇವಾಲಯದಲ್ಲಾಗಲಿ, ಸಭಾಮಂದಿರಗಳಲ್ಲಾಗಲಿ, ಪಟ್ಟಣದಲ್ಲಾಗಲಿ ನಾನು ಯಾರ ಸಂಗಡಲಾದರೂ ವಾದಿಸುವುದನ್ನು ಇಲ್ಲವೆ ಜನರ ಗುಂಪು ಕೂಡಿಸುವುದನ್ನು ಇವರು ನೋಡಲಿಲ್ಲ. 13ಇದಲ್ಲದೆ ಇವರು ಈಗ ನನ್ನ ಮೇಲೆಹೊರಿಸುವ ತಪ್ಪುಗಳನ್ನು ನಿಜವೆಂದು ನಿನಗೆ ತೋರಿಸಲಾರರು.
14
15
16
ಒಂದನ್ನು ಮಾತ್ರ ನಿನ್ನ ಮುಂದೆ ಒಪ್ಪಿಕೊಳ್ಳುತ್ತೇನೆ, ಅದೇನಂದರೆ - ಇವರು ನನ್ನನ್ನು ಧರ್ಮವಿರೋಧಿ ಎಂದೂ ಹೇಳುವ ಮಾರ್ಗಕ್ಕನುಸಾರವಾಗಿ ನಾನು ನಮ್ಮ ಪಿತೃಗಳ ದೇವರನ್ನು ಆರಾಧಿಸುವವನಾಗಿದ್ದೇನೆ. ಧರ್ಮಶಾಸ್ತ್ರಕ್ಕನುಗುಣವಾಗಿರುವ ಮತ್ತು ಪ್ರವಾದಿಗಳ ಗ್ರಂಥಗಳಲ್ಲಿ ಬರೆದಿರುವ ಎಲ್ಲಾ ವಿಷಯಗಳನ್ನು ನಂಬುತ್ತೇನೆ. 15ಇದಲ್ಲದೆ ನೀತಿವಂತರಿಗೂ ಮತ್ತು ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು ಇವರು ದೇವರಲ್ಲಿ ನಿರೀಕ್ಷೆಯಿಟ್ಟಿರುವ ಪ್ರಕಾರವೇ ನಾನೂ ನಿರೀಕ್ಷೆಯುಳ್ಳವನಾಗಿದ್ದೇನೆ; 16ಇದರ ದೆಸೆಯಿಂದ ದೇವರ ಮುಂದೆಯೂ ಮನುಷ್ಯರ ಮುಂದೆಯೂ ನಿರ್ದೋಷವಾದ ಮನಸಾಕ್ಷಿಯುಳ್ಳವನಾಗಿರಬೇಕೆಂದು ನಾನು ಯಾವಾಗಲೂ ಪ್ರಯತ್ನಿಸುತ್ತೇನೆ.
17
18
19
ಕೆಲವು ವರುಷಗಳಾದ ಮೇಲೆ ನಾನು ನನ್ನ ಸ್ವದೇಶದವರಿಗೆ ಧರ್ಮದ್ರವ್ಯಗಳನ್ನು ತರುವುದಕ್ಕೂ ಕಾಣಿಕೆಗಳನ್ನು ಒಪ್ಪಿಸುವುದಕ್ಕೂ ಬಂದೆನು. 18ನಾನು ಶುದ್ಧಮಾಡಿಕೊಂಡವನಾಗಿ ಅವುಗಳನ್ನು ಒಪ್ಪಿಸುತ್ತಿರುವಲ್ಲಿ ಇವರು ನನ್ನನ್ನು ದೇವಾಲಯದಲ್ಲಿ ಕಂಡರು; ಆಗ ನನ್ನೊಂದಿಗೆ ಜನರ ಗುಂಪೇನೂ ಇರಲಿಲ್ಲ; ಗದ್ದಲವೂ ಇರಲಿಲ್ಲ. ನನ್ನನ್ನು ಕಂಡವರು ಆಸ್ಯಸೀಮೆಯಿಂದ ಬಂದ ಕೆಲವು ಯೆಹೂದ್ಯರೇ; 19ನನ್ನ ಮೇಲೆ ಅವರಿಗೆ ಏನಾದರೂ ಇದ್ದರೆ ತಾವೇ ನಿನ್ನ ಮುಂದೆ ತಪ್ಪುಹೊರಿಸುವುದಕ್ಕೆ ಇಲ್ಲಿಗೆ ಬರಬೇಕಾಗಿತ್ತು.
20
21
ಇಲ್ಲವಾದ್ದರಿಂದ ನಾನು ಹಿರೀಸಭೆಯ ಎದುರಿನಲ್ಲಿ ನಿಂತಿದ್ದಾಗ ನನ್ನಲ್ಲಿ ತಪ್ಪುಗಳೇನಾದರೂ ಕಂಡಿದ್ದರೆ ಇವರೇ ಹೇಳಲಿ. 21ನಾನು ಇವರ ನಡುವೆ ನಿಂತು - ಪುನರುತ್ಥಾನದ ವಿಷಯದಲ್ಲಿ ಈಹೊತ್ತು ನಿಮ್ಮಿಂದ ನನಗೆ ವಿಚಾರಣೆಯಾಗುತ್ತದೆ ಎಂದು ಕೂಗಿದನೇ ಹೊರತು ಬೇರೆ ಏನನ್ನೂ ಹೇಳಲಾರರು ಅಂದನು.
22
23
ಫೇಲಿಕ್ಸನು ಕ್ರಿಸ್ತ ಮಾರ್ಗವನ್ನು ತಕ್ಕ ಮಟ್ಟಿಗೆ ತಿಳಿದವನಾಗಿದ್ದರೂ ಅವರಿಗೆ - ಸಹಸ್ರಾಧಿಪತಿಯಾದ ಲೂಸ್ಯನು ಬಂದ ಮೇಲೆ ನಿನ್ನ ಪ್ರಕರಣವನ್ನು ತೀರ್ಮಾನಿಸುತ್ತೇನೆಂದು ಹೇಳಿ ವಿಚಾರಣೆಯನ್ನು ತಡೆಮಾಡಿದನು. 23ಅನಂತರ ಪೌಲನನ್ನು ಕಾವಲ್ಲಿನಲ್ಲಿ ಇಡಬೇಕೆಂದೂ, ಆದರೆ ಕಟ್ಟು ನಿಟ್ಟು ಬೇಕಿಲ್ಲವೆಂದೂ, ಅವನಿಗೆ ಸಂಬಂಧಪಟ್ಟವರು ಅವನಿಗೆ ಉಪಚಾರ ಮಾಡುವುದನ್ನು ಅಡ್ಡಿಮಾಡಬಾರದೆಂದು ಶತಾಧಿಪತಿಗೆ ಅಪ್ಪಣೆಮಾಡಿದನು. ಪೌಲನು ಎರಡು ವರುಷ ಕಾವಲಿನಲ್ಲಿದ್ದದ್ದು; ಅವನು ಪ್ರಸ್ತಾಪಿಸಿದ್ದನ್ನು ಫೇಲಿಕ್ಸನು ಕೇಳಿ ಮನಸ್ಸಿನಲ್ಲಿ ಭಯಹಿಡಿದವನಾದದ್ದು.
24
25
ಕೆಲವು ದಿವಸಗಳಾದ ಮೇಲೆ ಫೇಲಿಕ್ಸನು ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಬಂದು ಪೌಲನನ್ನು ಕರೆಯಿಸಿಕೊಂಡು ಕ್ರಿಸ್ತ ಯೇಸುವಿನಲ್ಲಿಡತಕ್ಕ ನಂಬಿಕೆಯ ವಿಷಯವಾಗಿ ಅವನು ಹೇಳಿದ ಮಾತುಗಳನ್ನು ಕೇಳಿದನು. 25ಪೌಲನು ಸುನೀತಿ, ಸಂಯಮ, ಹಾಗೂ ಮುಂದಣ ನ್ಯಾಯವಿಚಾರಣೆ ಇವುಗಳ ವಿಷಯವಾಗಿ ಪ್ರಸ್ತಾಪಿಸುತ್ತಿದ್ದಾಗ ಫೇಲಿಕ್ಸನು ಭಯಗ್ರಸ್ತನಾಗಿ ಅವನಿಗೆ - ಸದ್ಯಕ್ಕೆ ಹೋಗು; ಸಮಯ ದೊರಕಿದಾಗ ನಿನ್ನನ್ನು ಕರೆಯಿಸುವೆನು ಎಂದು ಹೇಳಿದನು.
26
27
ಅದೇ ಸಮಯದಲ್ಲಿ ಅವನು ಪೌಲನು ತನಗೇನಾದರೂ ಹಣಕೊಡುವನೋ ಎಂಬುದಾಗಿಯೂ ನಿರೀಕ್ಷಿಸಿ, ಆಗಾಗ್ಗೆ ಅವನನ್ನು ಕರೆಯಿಸಿ ಅವನೊಂದಿಗೆ ಸಲ್ಲಾಪಮಾಡುತ್ತಿದ್ದನು. 27ಎರಡು ವರುಷಗಳು ತುಂಬಿದ ಮೇಲೆ ಫೇಲಿಕ್ಸನ ಸ್ಥಾನಕ್ಕೆ ಪೋರ್ಕಿಯ ಫೆಸ್ತನು ಬಂದನು. ಫೇಲಿಕ್ಸನು ಯೆಹೂದ್ಯರ ಪ್ರೀತಿಯನ್ನು ಸಂಪಾದಿಸಬೇಕೆಂದು ಪೌಲನನ್ನು ಹಾಗೆಯೇ ಸೆರೆಯಲ್ಲಿ ಬಿಟ್ಟು ಹೋದನು.