Introduction to translationAcademy

ಭಾಷಾಂತರ ಅಕಾಡೆಮಿಗೆ ಪೀಠಿಕೆ.

This section answers the following question: ಭಾಷಾಂತರ ಅಕಾಡೆಮಿ ಎಂದರೆ ಏನು ?

ಭಾಷಾಂತರ ಅಕಾಡೆಮಿಗೆ ಸ್ವಾಗತ.

"ಭಾಷಾಂತರ ಅಕಾಡೆಮಿ" ಯು ಪ್ರತಿಯೊಬ್ಬರೂ ಎಲ್ಲಿದ್ದರೂ ಸತ್ಯವೇದವನ್ನು ಅವರವರ ಭಾಷೆಯಲ್ಲಿ ಅತ್ಯತ್ತಮ ಮಟ್ಟದ ಭಾಷಾಂತರ ಮಾಡಲು ಸನ್ನದ್ಧರಾಗುವಂತೆ ಸಹಾಯಮಾಡುತ್ತದೆ.ಈ ಭಾಷಾಂತರ ಅಕಾಡೆಮಿಯನ್ನು ಎಲ್ಲ ವಿಚಾರಗಳು ಯಾರು ಬೇಕಾದರೂ ಸುಲಭವಾಗಿ ಸರಾಗವಾಗಿ ಭಾಷಾಂತರ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. ಇದನ್ನು ವ್ಯವಸ್ಥಿತವಾಗಿ, ಆಧುನಿಕ ತಂತ್ರಜ್ಞಾನದೊಂದಿಗೆ ಬಳಸಲು ಸಾಧ್ಯವಾಗುವಂತೆ ಮತ್ತು ಕಲಿಕೆಗಾಗಿ ಬಳಸಿಕೊಳ್ಳಲೂ ಅನುಕೂಲವಾಗುವಂತೆ ರಚಿಸಲಾಗಿದೆ ರಚನೆಯಲ್ಲಿ ಇದೊಂದು ಮಾದರಿ ಕೈಪಿಡಿಯಂತಿದೆ.

ಭಾಷಾಂತರ ಅಕಾಡೆಮಿಯಲ್ಲಿ ಈ ಕೆಳಗಿನ ಅಂಶಗಳು ಇವೆ.

  • ಪೀಠಿಕೆ - ಭಾಷಾಂತರ ಅಕಾಡೆಮಿ ಮತ್ತು ಅನಾವರಣಗೊಂಡ ಪದಯೋಜನೆಯನ್ನು ಪರಿಚಯಿಸುತ್ತದೆ.
  • ಪ್ರಕ್ರಿಯೆಯ ಕೈಪಿಡಿ – ಮುಂದಿನದು ಏನು ಎಂಬ ಪ್ರಶ್ನೆಗೆ ಉತ್ತರಿಸುತ್ತದೆ.
  • Translation Manual – ಭಾಷಾಂತರ ಕೈಪಿಡಿ ಭಾಷಾಂತರದ ಮೂಲಭೂತ ಸಿದ್ಧಾಂತ ಮತ್ತು ಪ್ರಾಯೋಗಿಕ ಭಾಷಾಂತರದ ಸಹಾಯ ಇವುಗಳನ್ನು ವಿವರಿಸುತ್ತದೆ.
  • ಪರಿಶೀಲನಾ ಕೈಪಿಡಿ - ಪರಿಶೀಲನಾ ಮೂಲಭೂತ ಸಿದ್ಧಾಂತ ಮತ್ತು ಜಾರಿಯಲ್ಲಿರುವ ಉತ್ತಮ ಪದ್ಧತಿಗಳನ್ನು ವಿವರಿಸುತ್ತದೆ.

ಸತ್ಯವೇದವನ್ನು ನಾವು ಏಕೆ ಭಾಷಾಂತರಿಸುತ್ತೇವೆ?

This section answers the following question: ಸತ್ಯವೇದವನ್ನು ನಾವು ಏಕೆ ಭಾಷಾಂತರಿಸಬೇಕು ?

ಭಾಷಾಂತರ ಅಕಾಡೆಮಿಯ ಉದ್ದೇಶವೇನೆಂದರೆ ಸತ್ಯವೇದದ ಭಾಷಾಂತರಗಾರರನ್ನು ತರಬೇತಿಗೊಳಿಸುವುದು. ದೇವರ ವಾಕ್ಯಗಳನ್ನು ನಿಮ್ಮ ಭಾಷೆಗೆ ಭಾಷಾಂತರಿಸುವುದು , ನಿಮ್ಮ ಜನರನ್ನು ಯೇಸುಕ್ರಿಸ್ತನ ಶಿಷ್ಯರನ್ನಾಗಿ ಬೆಳೆಸುವ ಮುಖ್ಯ ಕರ್ತವ್ಯ ನಿಮಗೆ ಇದೆ. ನೀವು ಈ ಕರ್ತವ್ಯವನ್ನು ನಿರ್ವಹಿಸುವುದಕ್ಕೆ ಬದ್ಧರಾಗಿರಬೇಕು .ನಿಮ್ಮ ಹೊಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಈ ಕಾರ್ಯದಲ್ಲಿ ದೇವರು ಸಹಾಯಮಾಡುವಂತೆ ಪ್ರಾರ್ಥಿಸಬೇಕು.

ಸತ್ಯವೇದದ ಮೂಲಕ ದೇವರು ನಮ್ಮೊಂದಿಗೆ ಮಾತನಾಡಿದ್ದಾನೆ. ಆತನು ಸತ್ಯವೇದವನ್ನು ಬರೆಯುವ ಬರಹಗಾರರಿಗೆ ಸ್ಫೂರ್ತಿಯಾಗಿದ್ದು ಆತನ ವಾಕ್ಯಗಳನ್ನು , ಮಾತುಗಳನ್ನು ಹಿಬ್ರೂ, ಅರಾಮಿಕ್, ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯುವಂತೆ ಪ್ರೇರೇಪಿಸಿದನು. ಕ್ರಿಸ್ತಪೂರ್ವ 1400ರಿಂದ ಕ್ರಿಸ್ತಶಕ 100ರವರೆಗೆ ಸುಮಾರು 40 ಬರಹಗಾರರು ಸತ್ಯವೇದವನ್ನು ಬರೆದರು. ಈ ಎಲ್ಲಾ ದಾಖಲೆಗಳನ್ನು ಮಧ್ಯಪೂರ್ವದೇಶದಲ್ಲಿ, ಉತ್ತರ ಆಫ್ರಿಕಾ ಮತ್ತು ಯೂರೋಪ್ ದೇಶಗಳಲ್ಲಿ ಬರೆಯಲಾಯಿತು. ಆತನ ಮಾತುಗಳನ್ನು ಅವರ ಭಾಷೆಯಲ್ಲಿ ದಾಖಲಿಸುವುದರೊಂದಿಗೆ ಆ ಕಾಲದಲ್ಲಿ ದೇವರು ಹೇಳಿದ ಮಾತುಗಳು ಆಯಾ ಸ್ಥಳದಲ್ಲಿದ್ದ ಜನರಿಗೆ ಅರ್ಥವಾಗುವಂತೆ ನೋಡಿಕೊಂಡರು.

ಪ್ರಸ್ತುತ ಇರುವ ನಿಮ್ಮ ದೇಶದ ಇಂದಿನ ಜನರು ಹಿಬ್ರೂ, ಅರಾಮಿಕ್ ಮತ್ತು ಗ್ರೀಕ್ ಭಾಷೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಆದರೆ ದೇವರ ವಾಕ್ಯವನ್ನು ಅವರ ಭಾಷೆಯಲ್ಲಿ ಭಾಷಾಂತರಿಸಿದರೆ ಅವರು ಸುಲಭವಾಗಿ ಅರ್ಥಮಾಡಿಕೊಳ್ಳ ಬಲ್ಲರು. ಒಬ್ಬರ "ಮಾತೃಭಾಷೆ" ಅಥವಾ "ಹೃದಯದ ಭಾಷೆ" ಎಂದರೆ ಅವರು ಮಗುವಾಗಿ ಮಾತಾಡಿದ ಮೊದಲ ಭಾಷೆ ಮತ್ತು ಮನೆಯಲ್ಲಿ ಮಾತನಾಡುವ ಭಾಷೆ. ಈ ಭಾಷೆಯಲ್ಲೇ ಅವರು ತುಂಬಾ ಸುಲಲಿತವಾಗಿ, ಅನುಕೂಲಕರವಾಗಿ ಮತ್ತು ಅವರ ಭಾವನೆಗಳನ್ನು, ಆಲೋಚನೆಗಳನ್ನು ಸುಲಭವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ದೇವರ ವಾಕ್ಯವನ್ನು ಅವರ ಹೃದಯದ ಭಾಷೆಯ ಮೂಲಕ ಓದಲು ಅನುಕೂಲ ಮಾಡಿಕೊಡುವುದು ಉತ್ತಮ. ಪ್ರತಿಯೊಂದು ಭಾಷೆಯೂ ಅತಿ ಮುಖ್ಯವಾದುದು ಮತ್ತು ಮೌಲ್ಯಯುತವಾದುದು.

ಅಲ್ಪಸಂಖ್ಯಾತ ಭಾಷೆಯೂ ಸಹ ನಿಮ್ಮ ರಾಷ್ಟ್ರೀಯ ಭಾಷೆಗಳಷ್ಟೇ ಮುಖ್ಯವಾದುದು ಮತ್ತು ಅದೇರೀತಿ ಅರ್ಥವನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸುತ್ತದೆ. ಅವರವರ ಭಾಷೆಯನ್ನು ಮಾತನಾಡಲು ಯಾರೂ ನಾಚಿಕೆ ಪಡಬಾರದು. ಕೆಲವೊಮ್ಮೆ ಕೆಲವರು ತಮ್ಮ ಅಲ್ಪಸಂಖ್ಯಾತ ಗುಂಪಿನ ಭಾಷೆಗಳನ್ನು ರಾಷ್ಟ್ರದ ಬಹುಸಂಖ್ಯಾತ ಭಾಷೆ ಮಾತನಾಡುವವರ ಮಧ್ಯದಲ್ಲಿ ಮಾತನಾಡಲು ನಾಚಿಕೊಳ್ಳುವರು. ಆದರೆ ಸ್ಥಳೀಯ ಭಾಷೆಗಿಂತ ಸಹಜವಾಗಿ ಹೇಳುವುದಾದರೆ ಯಾವುದೂ ಅಷ್ಟು ಮುಖ್ಯವಲ್ಲ ಅಷ್ಟೊಂದು ಪ್ರತಿಷ್ಠೆಯ ವಿಷಯವಲ್ಲ ಅಥವಾ ರಾಷ್ಟ್ರೀಯ ಭಾಷೆಯಲ್ಲಿ ವಿದ್ಯಾವಂತರಾಗಬೇಕೆಂದಿಲ್ಲ. ಪ್ರತಿಯೊಂದು ಭಾಷೆಯಲ್ಲೂ ಸೂಕ್ಷ್ಮ ವ್ಯತ್ಯಾಸ ಮತ್ತು ಅರ್ಥಗಳ ಛಾಯೆ ಅಸಾಧಾರಣವಾದುದು. ನಮಗೆ ಯಾವ ಭಾಷೆ ಹಿತಕರವಾಗಿದೆಯೋ ಅದನ್ನೇ ನಾವು ಉಪಯೋಗಿಸಬೇಕು ಮತ್ತು ನಮಗೆ ಯಾವ ಭಾಷೆಯಲ್ಲಿ ಸಂವಹನ ಮಾಡಲು ಸುಲಭವಾಗುತ್ತದೋ ಆ ಭಾಷೆಯನ್ನು ಬಳಸಬೇಕು .

ಶ್ರದ್ಧೆ (Credits): "ಬೈಬಲ್ ಭಾಷಾಂತರ ಸಿದ್ಧಾಂತಗಳು ಮತ್ತು ಪ್ರಾಯೋಗಿಕ ಪಡೆದದ್ದು" by Todd Price, Ph.D. CC BY-SA 4.0


ಅನಾವರಣಗೊಂಡ ಪದಗಳ ಯೋಜನೆ.

This section answers the following question: ಅನಾವರಣಗೊಂಡ ಪದಗಳ ಯೋಜನೆ ಎಂದರೆ ಏನು ?

** ನಿಬಂಧನೆಯಿಲ್ಲದ ಸತ್ಯವೇದದ ವಿಷಯವನ್ನು ಪ್ರತಿಯೊಂದು ಭಾಷೆಯಲ್ಲೂ ನಾವು ನೋಡಲು** ಅನಾವರಣಗೊಂಡ ಪದಗಳ ಯೋಜನೆ ಇರುವುದು ಯೇಸುಕ್ರಿಸ್ತನು “ಪ್ರತಿಯೊಂದು ಜನರ ಗುಂಪನ್ನು” ಆತನ ಶಿಷ್ಯರನ್ನಾಗಿ ಮಾಡುವಂತೆ ತನ್ನ ಶಿಷ್ಯರಿಗೆ ಅಪ್ಪಣೆ ಕೊಟ್ಟನು.

" ಯೇಸು ಅವರ ಬಳಿ ಬಂದು ಅವರನ್ನು ಕುರಿತು, ಭೂಪರಲೋಕಗಳಲ್ಲಿ ಮೇಲಿನ ಸರ್ವಾಧಿಕಾರವನ್ನು ನನಗೆ ಕೊಡಲ್ಪಟ್ಟಿದೆ ಎಂದು ಹೇಳಿದನು. ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ನನ್ನ ಶಿಷ್ಯರನ್ನಾಗಿ ಮಾಡಿ. ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ. ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕಾಪಾಡಿಕೊಳ್ಳುವಂತೆ ಅವರಿಗೆ ಉಪದೇಶಮಾಡಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ, ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ ಎಂದು ಹೇಳಿದನು'" (ಮತ್ತಾಯ 28:18-20 ULB)

ನಮಗೆ ವಾಗ್ದಾನ ಮಾಡಿದಂತೆ ಎಲ್ಲಾ ಭಾಷೆಯನ್ನು ಮಾತನಾಡುವ ಜನರು ಪರಲೋಕದಲ್ಲಿ ಇರುವರು:

"ಇವುಗಳಾದ ಮೇಲೆ ಇಗೋ, ಯಾರಿಂದಲೂ ಎಣಿಸಲಾಗದಂತಹ ಮಹಾ ಸಮೂಹವು ಸಿಂಹಾಸನದ ಮುಂದೆ ಯಜ್ಞದ ಕುರಿಯಾದಾತನ ಮುಂದೆಯು ನಿಂತಿರುವುದನ್ನು ಕಂಡೆನು. ಅವರು ಸಕಲ ಜನಾಂಗ, ಕುಲ, ಪ್ರಜೆಗಳವರು, ಸಕಲಭಾಷೆಗಳನ್ನು ಆಡುವವರು ಆಗಿದ್ದರು." (ಪ್ರಕಟಣೆ 7:9 ULB)

ದೇವರ ವಾಕ್ಯಗಳನ್ನು ಹೃದಯದ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದು ಬಹು ಮುಖ್ಯವಾದುದು .

"ಆದ ಕಾರಣ ಸಾರಿದ ವಾರ್ತೆಯು ನಂಬಿಕೆಗೆ ಆಧಾರ, ಆ ವಾರ್ತೆಗೆ ಕ್ರಿಸ್ತನ ವಾಕ್ಯವೇ ಆಧಾರ." (ರೋ.ಪ. 10:17 ULB)

ನಾವು ಇದನ್ನು ಹೇಗೆ ಮಾಡಬಹುದು ?

ನಿರ್ಬಂಧವಿಲ್ಲದ ಸತ್ಯವೇದದ ವಿಷಯದ ಉದ್ದೇಶವನ್ನು ಪ್ರತಿಯೊಂದು ಭಾಷೆಯಲ್ಲಿ ನಾವು ಹೇಗೆ ನಿರ್ವಹಿಸಬಹುದು?

ನಾವು ಏನು ಮಾಡಬೇಕು ?

  • ವಿಷಯ - ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು ನಾವು ಸೃಷ್ಟಿಸಿ ಮತ್ತು ಲಭ್ಯವಿರುವುದನ್ನು ಭಾಷಾಂತರ ಮಾಡಲು ಒದಗಿಸುವುದು. ಸಂಪೂರ್ಣವಾದ ಸಂಪನ್ಮೂಲ ಮತ್ತು ಭಾಷಾಂತರಗಳ ಪಟ್ಟಿಯನ್ನು ಪಡೆಯಲು ನೋಡು See http://ufw.io/content/ ಇಲ್ಲಿ ಕೆಲವು ಮಾದರಿಯನ್ನು ನೀಡಿದೆ.
  • ಮುಕ್ತ ಸತ್ಯವೇದದ ಕತೆಗಳು - ಕಾಲಾನುಕ್ರಮವಾದ ಚಿಕ್ಕ ಸತ್ಯವೇದದಲ್ಲಿ 50 ಮುಖ್ಯಕತೆಗಳನ್ನು ಸೇರಿಸಿ ಮಾಡಲಾಗಿದೆ. ಇದರಲ್ಲಿ ಸೃಷ್ಟಿಯಿಂದ (ಆದಿಕಾಂಡ -ಪ್ರಕಟಣೆಯ ಗ್ರಂಥದವರೆಗೂ, ಸುವಾರ್ತೆ ಸಾರಲು ಮತ್ತು ಶಿಷ್ಯತ್ವಗಳನ್ನು ಕುರಿತು ಮುದ್ರಣದಲ್ಲಿ, ಆಡಿಯೋ ಮತ್ತು ವೀಡಿಯೋಗಳಲ್ಲಿ ಅಳವಡಿಸಿದೆ. (ನೋಡಿ http://ufw.io/stories/).
  • ಸತ್ಯವೇದ -ವು ಸ್ಪೂರ್ತಿದಾಯಕವಾಗಿ, ಸಹಜವಾಗಿ, ಸಂಪೂರ್ಣವಾಗಿ, ಅಧಿಕಾರಯುತವಾಗಿರುವ ದೇವರ ವಾಕ್ಯವನ್ನು ಮುಕ್ತಪರವಾನಗಿಯಡಿಯಲ್ಲಿ ದೊರೆಯುವಂತೆ ಮಾಡಿದುದಲ್ಲದೆ, ನಿರ್ಬಂಧವಿಲ್ಲದ ಭಾಷಾಂತರ ಮಾಡಲು, ಬಳಸಲು ಮತ್ತು ವಿತರಿಸಲು ಅವಕಾಶ ಮಾಡಿಕೊಟ್ಟಿದೆ. (ನೋಡಿ http://ufw.io/bible/).
  • ಭಾಷಾಂತರ ಟಿಪ್ಪಣಿಗಳು - ಭಾಷಾಶಾಸ್ತ್ರ, ಸಾಂಸ್ಕೃತಿಕ ಮತ್ತು ಸತ್ಯವೇದ ಅಭ್ಯಾಸಕ್ಕೆ ಬೇಕಾದ ಸಹಾಯವನ್ನು ಭಾಷಾಂತರಗಾರರಿಗೆ ನೀಡುವಂತದ್ದು. ಇವು ಮುಕ್ತ ಬೈಬಲ್ ಕತೆಗಳಿಗೆ ಮತ್ತು ಬೈಬಲ್ ಗೆ ಇರುವಂತದ್ದು. (ನೋಡಿ http://ufw.io/tn/).
  • ಭಾಷಾಂತರ ಪ್ರಶ್ನೆಗಳು -ಭಾಷಾಂತರಗಾರರು ಮತ್ತು ಪರಿಶೀಲನೆ ಮಾಡುವವರು ಪ್ರಶ್ನೆಕೇಳಲು ಒದಗಿಸುವ ವಾಕ್ಯಭಾಗದ ಚಿಕ್ಕಚಿಕ್ಕ ಭಾಗಗಳು. ಇವು ಅವರು ಮಾಡಿರುವ ಭಾಷಾಂತರಗಳು ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿದೆಯೇ ಎಂಬುದನ್ನು ದೃಢಪಡಿಸಲು ಸಹಾಯಮಾಡುತ್ತವೆ. ಮುಕ್ತ ಸತ್ಯವೇದದ ಕತೆಗಳು ಮತ್ತು ಸತ್ಯವೇದಗಳಿಗೆ ಲಭ್ಯವಿರುವಂತದ್ದು. (see http://ufw.io/tq/).

ನಂಬಿಕೆಯ ಹೇಳಿಕೆಗಳು.

This section answers the following question: ನಾವು ಯಾವುದನ್ನು ನಂಬುತ್ತೇವೆ ?

ಈ ದಾಖಲೆಯ ಪ್ರತಿಯು ಈ ಲಿಂಕ್ ನಲ್ಲಿ http://ufw.io/faith/ದೊರೆಯುತ್ತದೆ.

ಈ ಕೆಳಗಿನ ವಿಶ್ವಾಸಾರ್ಹ ಹೇಳಿಕೆಗಳು ಹೇಳಿರುವಂತಹ ಸಂಸ್ಥೆಯ ಸದಸ್ಯರು ಮತ್ತು. ಅನಾವರಣಗೊಂಡ ಪದಗಳು ಈ ಪ್ರಾಜೆಕ್ಟ್ ಗೆ ಕೊಡುಗೆ ನೀಡಿದವರೆಲ್ಲರೂ ಒಪ್ಪಿಗೆಯನ್ನು ನೀಡಿದ್ದಾರೆ ಇದೊಂದು ಒಪ್ಪಂದ – ಐತಿಹಾಸಿಕ ವಿಶ್ವಾಸ ಪ್ರಮಾಣ : ಅಪೋಸ್ತಲರ ವಿಶ್ವಾಸ ಪ್ರಮಾಣ, ನೈಸೀಯ ವಿಶ್ವಾಸ ಪ್ರಮಾಣ, ಮತ್ತು ಅತನೇಶಿಯನ್ ವಿಶ್ವಾಸ ಸೂತ್ರ ಮತ್ತು ಲೂಸಾನೆ ಒಡಂಬಡಿಕೆ.

ಕ್ರೈಸ್ತ ವಿಶ್ವಾಸವನ್ನು ಅವಶ್ಯವಿರುವ ವಿಶ್ವಾಸಗಳು ಮತ್ತು ಬಾಹ್ಯ ನಂಬಿಕೆ ಎಂದು ವಿಂಗಡಿಸಬಹುದು ಎಂದು ನಾವು ನಂಬುತ್ತೇವೆ. (ರೋಮಾಪುರದವರಿಗೆ ಬರೆದ ಪತ್ರಿಕೆ 14).

ಅವಶ್ಯವಿರುವ ನಂಬಿಕೆಗಳು.

ಯೇಸುವನ್ನು ಅನುಸರಿಸಿ ನಡೆಯುವವರ ಬಗ್ಗೆ ತೀರ್ಮಾನಿಸಲು ಅವಶ್ಯವಾದ ನಂಬಿಕೆಗಳು ಮತ್ತು ಇವುಗಳೊಂದಿಗೆ ರಾಜಿ ಮಾಡಿಕೊಳ್ಳುವುದು ಅಥವಾ ಉದಾಸೀನ ಮಾಡಲು ಸಾಧ್ಯವಿಲ್ಲ.

  • ನಮ್ಮ ನಂಬಿಕೆಯಂತೆ ಬೈಬಲ್ (ಸತ್ಯವೇದ ಸ್ಪೂರ್ತಿದಾಯಕ, ಸನ್ಮಾರ್ಗದಲ್ಲಿ ನಡೆಯುವ, ಸಂಪೂರ್ಣವಾದ, ಅಧಿಕಾರಯುತವಾದ ದೇವರ ಮಾತುಗಳನ್ನು ಒಳಗೊಂಡಿರುವಂತದ್ದು (1 ಥೆಸಲೋನಿಕ 2:13; 2 ತಿಮೋಥಿ 3:16-17).
  • ದೇವರು ಒಬ್ಬನೆ, ನಿತ್ಯ ಶಾಶ್ವತವಾಗಿ ನೆಲೆಸಿರುವವನು ತ್ರಯೇಕ ಎಂದು ನಾವು ನಂಬಿದ್ದೇವೆ. ತಂದೆ ದೇವರು, ಮಗನಾದ ಯೇಸುಕ್ರಿಸ್ತನು ಪವಿತ್ರಾತ್ಮನು ಮೂವರು ಒಬ್ಬರೇ (ಮತ್ತಾಯ ಯೋಹಾನ 10:30).
  • ನಾವು ಯೇಸುಕ್ರಿಸ್ತನ ದೈವತ್ವವನ್ನು ನಂಬುತ್ತೇವೆ (ಯೋಹಾನ 1:1-4; ಪಿಲಿಪ್ಪಿಯರು 2:5-11; 2ನೇ ಪೇತ್ರ1:1).
  • ಯೇಸುಕ್ರಿಸ್ತನ ಮಾನವೀಯತೆಯನ್ನು ನಂಬುತ್ತೇವೆ. ಆತನ ಪರಿಶುದ್ಧವಾದ ಗುಟ್ಟನ್ನು, ಆತನ ಪಾಪರಹಿತ ಜೀವನಕ್ಕಾಗಿ, ಆತನ ಪವಾಡಗಳನ್ನು, ಆತನ ರಕ್ತಧಾರೆಯಿಂದ ಪಾಪಿಗಳ ರಕ್ಷಣೆಗಾಗಿ ಜೀವತೆತ್ತವನನ್ನು, ಆತನ ಪುನರುತ್ಥಾನವನ್ನು ಮತ್ತು ಆತನ ದಿವಾರೋಹಣವನ್ನು, ತಂದೆ ದೇವರ ಬಲಪಾರ್ಶ್ವದಲ್ಲಿ ಕುಳಿತಿರುವುದನ್ನು ನಾವು ನಂಬುತ್ತೇವೆ. (ಮತ್ತಾಯ 1:18,25; 1 ಕೊರಿಂಥ 15:1-8; ಇಬ್ರಿಯಾ 4:15; ಆ.ಕೃ 1:9-11; ಆ.ಕೃ 2:22-24).
  • ಪ್ರತಿಯೊಬ್ಬ ಮನುಷ್ಯನೂ ಅಂತರ್ಗತವಾಗಿ ಪಾಪಿಯಾಗಿರುತ್ತಾನೆ ಮತ್ತು ನಿರಂತರವಾಗಿ ನರಕವನ್ನು ಹೊಂದಲು ಅರ್ಹನಾಗಿರುತ್ತಾನೆ ಎಂಬುದನ್ನು ನಂಬುತ್ತೇವೆ. (ರೋ.ಪ. 3:23; ಯೆಶಾಯ 64:6-7).
  • ಪಾಪದಿಂದ ವಿಮೋಚನೆ ಪಡೆಯುವುದೆಂದರೆ ದೇವರಿಂದ ದೊರೆಯುವ ವರ, ಇದು ಯೇಸು ಕ್ರಿಸ್ತನ ತ್ಯಾಗಪೂರ್ಣ ಮರಣ ಮತ್ತು ಆತನ ಪುನರುತ್ಥಾನದಿಂದ , ಆತನ ಕೃಪೆ ಮತ್ತು ಭರವಸೆಯಿಂದ ದೊರೆಯುತ್ತದೆಯೇ ಹೊರತು ನಮ್ಮ ಕಾರ್ಯದಿಂದಲ್ಲ ಎಂದು ನಂಬುತ್ತೇವೆ. (ಯೋಹಾನ 3:16; ಯೋಹಾನ 14:6; ಎಫೇಸ 2:8-9, ತೀತ 3:3-7).
  • ನಿಜವಾದ ನಂಬಿಕೆ ಯಾವಾಗಲೂ ಪಶ್ಚಾತ್ತಾಪ ಮತ್ತು ಪವಿತ್ರಾತ್ಮನಿಂದ ಉಂಟಾಗುವ ಪುನರುಜ್ಜೀವನ ವನ್ನು ಒಳಗೊಂಡಂತೆ ದೊರೆಯುವಂತದ್ದು ಎಂದು ನಾವು ನಂಬುತ್ತೇವೆ. (ಯಾಕೋಬ 2:14-26; ಯೋಹಾನ 16:5-16; ರೋ.ಪ. 8:9).
  • ಪವಿತ್ರಾತ್ಮನಿಂದ ಉಂಟಾದ ದೇವರ ಸೇವೆ , ಯೇಸುಕ್ರಿಸ್ತನ ಹಿಂಬಾಲಕರಲ್ಲಿ ನೆಲೆಸಿರುವ ಪವಿತ್ರಾತ್ಮನಿಂದ ಆಗುವ ಸೇವೆ ದೈವೀಕವಾದ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ನಂಬುತ್ತೇವೆ. (ಯೋಹಾನ 14:15-26; ಎಫೇಸ 2:10; ಗಲಾತ್ಯ 5:16-18).
  • ನಮ್ಮ ಒಡೆಯನಾದ ಯೇಸು ಕ್ರಿಸ್ತನ ಆತ್ಮೀಕ ಐಕ್ಯತೆಯಲ್ಲಿ ಎಲ್ಲಾ ವಿಶ್ವಾಸಿಗಳು ಎಲ್ಲಾ ದೇಶದವರು , ಎಲ್ಲಾ ಭಾಷೆಯವರು , ಎಲ್ಲಾ ಜನಾಂಗಗಳು ಒಂದಾಗುತ್ತಾರೆ ಎಂದು ನಾವು ನಂಬುತ್ತೇವೆ. (ಪಿಲಿಪ್ಪಿ 2:1-4; ಎಫೇಸ 1:22-23; 1 ಕೊರಿಂಥ 12:12,27).
  • ಯೇಸುಕ್ರಿಸ್ತನು ವೈಯಕ್ತಿಕವಾಗಿಯೂ, ಭೌತಿಕವಾಗಿಯೂ ಪುನಃ ಬರುತ್ತಾನೆ ಎಂಬುದನ್ನು ನಾವು ನಂಬುತ್ತೇವೆ. (ಮತ್ತಾಯ 24:30; ಆ.ಕೃ.1:10-11).
  • ರಕ್ಷಿಸಲ್ಪಟ್ಟವನು ಮತ್ತು ರಕ್ಷಿಸಲ್ಪಡದವರ ಪುನರುತ್ಥಾನದ ಬಗ್ಗೆ ನಮಗೆ ನಂಬಿಕೆ ಇದೆ. ರಕ್ಷಣೆಗೆ ಒಳಪಡದವರು, ನಿರಂತರ ನಿತ್ಯ ದಂಡನೆಗೆ ಗುರಿಯಾದವರು ಮತ್ತು ರಕ್ಷಿಸಲ್ಪಟ್ಟವರು ಪರಲೋಕದಲ್ಲಿ ನಿರಂತರ ಆಶೀರ್ವಾದಕ್ಕೆ ಒಳಗಾಗುತ್ತಾರೆ ಎಂಬುದನ್ನು ನಾವು ನಂಬುತ್ತೇವೆ. (ಇಬ್ರಿಯ 9:27-28; ಮತ್ತಾಯ 16:27; ಯೋಹಾನ 14:1-3; ಮತ್ತಾಯ 25:31-46).

ಬಾಹ್ಯ ನಂಬಿಕೆಗಳು .

ಬಾಹ್ಯ ನಂಬಿಕೆಗಳು ಸತ್ಯವೇದದಲ್ಲಿ ಬರುವ ನಂಬಿಕೆಗಳಕುರಿತಾಗಿದ್ದು ಕ್ರಿಸ್ತನಿಗೆ ನಿಷ್ಠರಾಗಿರುವ ಭಕ್ತರು ಇದನ್ನು ಒಪ್ಪದೆ ಇರಬಹುದು (ಉದಾಹರಣೆಗೆ ದೀಕ್ಷಾಸ್ನಾನ, ಕರ್ತನ ರಾತ್ರಿ ಭೋಜನ, ಕ್ರಿಸ್ತನ ಗಾಯಗಳು ಮುಂತಾದವು).

ಈ ಎಲ್ಲಾ ವಿಷಯಗಳ ಬಗ್ಗೆ ಒಪ್ಪದೆ ಇದ್ದರೂ ಅಭಿಮತರಾಗಿರುತ್ತೇವೆ ಮತ್ತು ನಾವೆಲ್ಲರೂ ಸುವಾರ್ತೆ ಸಾರುವುದರ ಮೂಲಕ ಜನರನ್ನು ಕರ್ತನ ಶಿಷ್ಯರನ್ನಾಗಿ ಮಾಡುವ ಒಂದೇ ಸಾಮಾನ್ಯ ಉದ್ದೇಶವನ್ನು ನೆರವೇರಿಸಲು ಒಪ್ಪುತ್ತೇವೆ. (ಮತ್ತಾಯ 28:18-20).


ಭಾಷಾಂತರ ಮಾರ್ಗದರ್ಶನಗಳು.

This section answers the following question: ಯಾವ ತತ್ವಗಳ ಆಧಾರದಿಂದ ನಾವು ಭಾಷಾಂತರ ಮಾಡಬೇಕು ?

ಈ ದಾಖಲೆಯ ಅಧಿಕೃತ ಪ್ರತಿಯನ್ನು ಈ ಲಿಂಕ್ ನಲ್ಲಿ ಪಡೆಯಬಹುದು. http://ufw.io/guidelines/.

ಈ ಕೆಳಗೆ ನೀಡಿರುವ ತತ್ವಗಳು ಮತ್ತು ವಿಧಾನಗಳನ್ನು ಭಾಷಾಂತರ ಮಾಡುವಾಗ ಉಪಯೋಗಿಸಲಾಗು -ತ್ತದೆ.ಇವುಗಳನ್ನು ಸಂಸ್ಥೆಯ ಸದಸ್ಯರು ಮತ್ತು ಕೊಡುಗೆದಾರರು ಪದ ಅನಾವರಣ ಪ್ರಾಜೆಕ್ಟ್ /ಯೋಜನೆಗೆ ಒಪ್ಪಿಗೆ ನೀಡುವವರಿದ್ದಾರೆ.(see https://unfoldingword.org). ಎಲ್ಲಾ ಭಾಷಾಂತರ ಪ್ರಕ್ರಿಯೆಗಳು ಈ ಸಾಮಾನ್ಯ ಮಾರ್ಗದರ್ಶನಗಳನ್ನು ಅನುಸರಿಸಿ ನಡೆಯುತ್ತವೆ.

  1. ನಿರ್ದಿಷ್ಟವಾದ — ಮೂಲಪಠ್ಯ /ವಿಷಯಗಳನ್ನು ನಿರ್ದಿಷ್ಟವಾಗಿ, ವಿಷಯವನ್ನು ಬಿಟ್ಟು ಬೇರೆಯದನ್ನು ಸೇರಿಸದೆ, ಬದಲಾಯಿಸದೆ ಇರುವ ಅರ್ಥವನ್ನು ಬಿಟ್ಟು ನಿಮ್ಮದೇ ಆದ ವಿವರವನ್ನು ನೀಡುವುದು ಇವು ಯಾವುದನ್ನೂ ಮಾಡದೆ ನಿರ್ದಿಷ್ಟವಾದ ಭಾಷಾಂತರ ಮಾಡಬೇಕು. ಭಾಷಾಂತರಿಸಿದ ವಿಷಯ ಪ್ರಾಮಾಣಿಕವಾಗಿ ಎಷ್ಟು ಸಂಕ್ಷಿಪ್ತವಾಗಿ ತಿಳಿಸಬಹುದೋ ಅಷ್ಟು ಸಂಕ್ಷಿಪ್ತವಾಗಿ, ಮೂಲ ವಿಷಯದ ಅರ್ಥಕೆಡದಂತೆ ಮೂಲ ಓದುಗರು ಅರ್ಥಮಾಡಿಕೊಂಡಂತೆ ತಿಳಿಸಲು ಭಾಷಾಂತರ ಮಾಡಬೇಕು. (see Create Accurate Translations)
  2. ಸ್ಪಷ್ಟವಾದ — ಭಾಷಾಂತರಿಸುವಾಗ ಅತ್ಯನ್ನತ ಮಟ್ಟದ ಗ್ರಹಿಕೆಗೆ ಅನುಗುಣವಾಗಿ ಯಾವ ಭಾಷಾರಚನೆಯನ್ನಾದರೂ ಅವಶ್ಯಕತೆಗೆ ತಕ್ಕಂತೆ ಬಳಸಬಹುದು. ಮೂಲ ವಿಷಯವನ್ನು ಸ್ಪಷ್ಟವಾಗಿ ತಿಳಿಸಲು ಎಷ್ಟು ಸಾಧ್ಯವೋ ಅಷ್ಟು ನಿಖರವಾಗಿ ಅವಶ್ಯವಿರುವ ಪದಗಳನ್ನು ಬಳಸಿ ಪುನರ್ ರಚಿಸಬಹುದು.. (see Create Clear Translations)
  3. ಸಹಜವಾದ — ನಿಮ್ಮ ಭಾಷೆಯಲ್ಲಿ ಬಳಸಿರುವ ಅನುರೂಪ ವಿಷಯವನ್ನು ಸಹಜವಾಗಿ ತಿಳಿಸಲು ಭಾಷೆಯ ವಿವಿಧ ರೂಪವನ್ನು ಪರಿಣಾಮಕಾರಿಯಾಗಿ ಬಳಸುವುದರೊಂದಿಗೆ ಅದು ನಿಮ್ಮ ಭಾಷೆಯಲ್ಲಿ ಪ್ರತಿಬಿಂಬಿತವಾಗಿರಬೇಕು. (see Create Natural Translations)
  4. ವಿಶ್ವಾಸಪೂರ್ಣ — ನಿಮ್ಮ ಭಾಷಾಂತರದಲ್ಲಿ ಯಾವುದೇ ರಾಜಕೀಯ ವಿಷಯವನ್ನಾಗಲೀ ಪಂಗಡವನ್ನಾಗಲೀ ಸಿದ್ಧಾಂತಗಳನ್ನಾಗಲೀ, ಸಾಮಾಜಿಕ ಸಾಂಸ್ಕೃತಿಕ ಅಥವಾ ದೈವಶಾಸ್ತ್ರವಾಗಲೀ ಬರದಂತೆ ತಡೆಹಿಡಿಯಬೇಕು. ಮೂಲಸತ್ಯವೇದ ಆಧಾರಿತ ಭಾಷೆಗಳಲ್ಲಿ ಬರುವ ಭಾಷಾ ಸಂಪತ್ತಿಗೆ ನಿಷ್ಠೆಯುಳ್ಳ ಮುಖ್ಯಪದಗಳನ್ನು ಬಳಸಿಕೊಳ್ಳಿ. ತಂದೆ ದೇವರು ಮತ್ತು ದೇವಕುಮಾರನ ನಡುವೆ ಇರುವ ಸಂಬಂಧವನ್ನು ವಿವರಿಸಲು ಸಾಮಾನ್ಯವಾಗಿ ಬಳಸುವ ಭಾಷಾ ಪದಗಳನ್ನು ಸತ್ಯವೇದದಲ್ಲಿ ಬರುವ ಪದಗಳಿಗೆ ಪರ್ಯಾಯವಾಗಿ ಬಳಸಿಕೊಳ್ಳಿ. ಇವುಗಳನ್ನು ಅಡಿಟಿಪ್ಪಣಿಯಲ್ಲಿ ಅಥವಾ ಪೂರಕ ಸಂಪನ್ಮೂಲಗಳೊಂದಿಗೆ ಅವಶ್ಯವಿದ್ದರೆ (see ನಿಷ್ಠೆಯುಳ್ಳ ಭಾಷಾಂತರವನ್ನು ಸೃಷ್ಟಿಸಿ)
  5. ಅಧಿಕಾರವುಳ್ಳ — ಮೂಲ ಸತ್ಯವೇದ ವಾಕ್ಯದ ಭಾಷೆಯು ಸತ್ಯವೇದದ ವಿಷಯವನ್ನು ಭಾಷಾಂತರ ಮಾಡಲು ಉನ್ನತ ಅಧಿಕಾರವನ್ನು ಹೊಂದಿದೆ. ಇದನ್ನೇ ನಿಮ್ಮ ಭಾಷಾಂತರದಲ್ಲಿ ಬಳಸಬೇಕು. ನಂಬಲರ್ಹವಾದ ಸತ್ಯವೇದದ ವಿಷಯವನ್ನು ಇತರ ಭಾಷೆಗಳಲ್ಲಿ ಬಳಸುತ್ತಾರೆ. ಏಕೆಂದರೆ ಇದರ ನಿಖರತೆ ಮತ್ತು ಆಕರಗ್ರಂಥಗಳ ತಾತ್ಪೂರ್ತಿಕತೆಯನ್ನು ಕಂಡುಕೊಳ್ಳಲು ಬಳಸುತ್ತಾರೆ. (see Create Authoritative Translations)
  6. ಐತಿಹಾಸಿಕ — ಐತಿಹಾಸಿಕವಾಗಿ ನಡೆದ ಘಟನೆಗಳು ಮತ್ತು ವಾಸ್ತವಾಂಶಗಳನ್ನು ನಿಖರವಾಗಿ ತಿಳಿಸಬೇಕು, ಇದರೊಂದಿಗೆ ನಿಖರವಾಗಿ ತಿಳಿಸಬೇಕಾದ ಹೆಚ್ಚಿನ ಮಾಹಿತಿಗಳನ್ನು ತಿಳಿಸಲು ಉದ್ದೇಶಿಸಿರುವ ಮಾಹಿತಿಗಳನ್ನು ಮೂಲವಿಷಯವನ್ನು ತಿಳಿದಿರುವವರೊಂದಿಗೆ ಕೆಲವೊಮ್ಮೆ ಜನರು ಅದೇ ವಿಷಯವನ್ನ ಮತ್ತು ಸಂಸ್ಕೃತಿಯನ್ನು ಸರಿಯಾಗಿ ಹಂಚಿಕೊಳ್ಳತಕ್ಕದ್ದು. (see Create Historical Translations
  7. ಸಮಾನ — ಆಕರ ಗ್ರಂಥಗಳಲ್ಲಿ ಇರುವ ವಿಷಯದ ಜೊತೆಗೆ ಭಾವನೆಗಳನ್ನು ಮತ್ತು ಮನೋದೋರಣೆಗಳನ್ನು ಸಂವಹನ ಮಾಡತಕ್ಕದ್ದು. ಮೂಲ ವಾಕ್ಯಭಾಗದಲ್ಲಿರುವ ವಿವಿಧ ಸಾಹಿತ್ಯ ಪ್ರಕಾರಗಳನ್ನು ಯಥಾವತ್ತಾಗಿ ಇಡಲು ಪ್ರಯತ್ನಿಸಬೇಕು. ಇವುಗಳಲ್ಲಿ ನಿರೂಪಣಾ ಮಾದರಿಯ ವಿಷಯ, ಪದ್ಯರೂಪ , ಪ್ರವಾದನೆಗಳು, ಎಚ್ಚರಿಕೆಗಳು ಮುಂತಾದವುಗಳು ನೀಡುವ ಪರಿಣಾಮವನ್ನು ನಿಮ್ಮ ಭಾಷೆಯಲ್ಲೂ ಬಳಸಿ ಸಮಾನ ಭಾಷಾಂತರವನ್ನು ಕಾಯ್ದುಕೊಳ್ಳಬೇಕು. (see Create Equal Translations)

ಭಾಷಾಂತರದ ಗುಣಮಟ್ಟವನ್ನು ಗುರುತಿಸುವುದು ಮತ್ತು ಅದನ್ನು ನಿರ್ವಹಣೆ ಮಾಡುವುದು

ಭಾಷಾಂತರದ ಗುಣಮಟ್ಟವನ್ನು ಸಾಮಾನ್ಯವಾಗಿ ಮೂಲಪ್ರತಿಯ ಯಥಾವತ್ತು ಭಾಷಾಂತರ ಆಗಿದೆಯೇ ಎಂಬುದನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಇದರೊಂದಿಗೆ ಭಾಷಾಂತರ ಮಾಡಿರುವ ವಿಷಯವು ಆ ಭಾಷೆಯನ್ನು ಮಾತನಾಡುವ ಜನರಿಗೆ ಎಷ್ಟು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ ಎಂಬುದರ ಮೇಲೆ ಅವಲಂಭಿತವಾಗಿದೆ. ಭಾಷಾ ಸಮುದಾಯದೊಂದಿಗೆ ಭಾಷಾಂತರದ ಗುಣಮಟ್ಟವನ್ನು ಪರಿಶೀಲಿಸಲು ನಾವು ನೀಡುವ ಸಲಹೆ ಎಂದರೆ ಆ ಭಾಷೆಯ ಜನರಿಗೆ ಸುಲಭವಾಗಿ ಅರ್ಥವಾಗಬೆಕು ಮತ್ತು ಆ ಭಾಷೆಯಜನರ ಸಮೂಹವು ಮೂಲವಿಷಯದ ಯಥಾವತ್ತಾದ ಭಾಷಾಂತರ ಆಗಿರುವ ಬಗ್ಗೆ ಪರಿಶೀಲಿಸಿ ದೃಢಪಡಿಸಬೇಕು. ಭಾಷಾಂತರ ಯೋಜನೆಯ ಪ್ರಕ್ರಿಯೆಯಲ್ಲಿ ಭಾಷೆಯನ್ನು ಆಧಾರದ ಮೇಲೆ ನಿರ್ದಿಷ್ಟವಾದ ಹಂತಗಳು ಕೆಲವೊಮ್ಮೆ ವಿಶೇಷರೀತಿಯಲ್ಲಿ ಭಿನ್ನವಾಗಿರಬಹುದು.

ಸಾಮಾನ್ಯವಾಗಿ ಭಾಷಾಂತರ ಉತ್ತಮವಾಗಿದೆ ಎಂದು ನಿರ್ಧರಿಸಲು ಭಾಷಾಂತರ ಉತ್ತಮವಾಗಿದೆ ಎಂದು ನಿರ್ಧರಿಸಲು ಭಾಷಾಂತರ ಆಗಿರುವ ವಿಷಯ್ನ್ನು ಆ ಭಾಷೆಯನ್ನು ನಿರ್ಧರಿಸಲು ಭಾಷಾಂತರ ಆಗಿರುವ ವಿಷಯವನ್ನು ಆ ಭಾಷೆಯನ್ನು ಮಾತನಾಡುವ ಸಮುದಾಯದ ಜನರು ಮತ್ತು ಅದೇ ಭಾಷೆ ಮಾತನಾಡುವ ಚರ್ಚ್ ನ ನಾಯಕರು ಪುನರ್ ಪರಿಶೀಲನೆ ಮಾಡಿರಬೇಕು.

  1. ನಿಖರವಾದ, ಸಷ್ಟವಾದ, ಸಹಜವಾದ, ಮತ್ತು, ಸಮಾನವಾದ — ಮೂಲ ವಿಷಯಕ್ಕೆ ವಿಶ್ವಾಸಾರ್ಹವಾದ , ಅರ್ಥಪೂರ್ಣ ಭಾಷಾಂತರ ಉದ್ದೇಶದೊಂದಿಗೆ , ಸಭಾ ಜನರ ಗುಂಪು ನಿರ್ಧರಿಸಿದಂತೆ ಜಾಗತಿಕ ಮಟ್ಟದ ಚರ್ಚ್ ಮತ್ತು ಐತಿಹಾಸಿಕ ಮತ್ತು ಪರಿಣಾಮಕಾರಿಯಾಗಿ ಒಪ್ಪಂದ ಮಾಡಿಕೊಳ್ಳುವುದು .
  2. ಚರ್ಚ್ ನಿಂದ ದೃಢಪಡಿಸಿದ್ದು - ಚರ್ಚ್ ನಿಂದ ಬಳಸಿ ಮತ್ತು ದೃಢಪಡಿಸಿದ್ದು (ನೋಡಿ Create Church-Approved Translations)

ನಾವು ಇದರೊಂದಿಗೆ ಈ ಕೆಳಗಿನಂತೆ ಭಾಷಾಂತರ ಕಾರ್ಯ ಇರಬೇಕೆಂದು ಶಿಫಾರಸ್ಸು ಮಾಡುತ್ತೇವೆ:

  1. ಸಹಕಾರ — ಹೆಚ್ಚಿನ ಗುಣಮಟ್ಟವನ್ನು ಹೊಂದಿದ ಮತ್ತು ಎಷ್ಟು ಸಾಧ್ಯವೋ ಅಷ್ಟು ಜನರಿಗೆ ಹಂಚಬಹುದಾದ ಈ ಭಾಷಾಂತರ ಮಾಡಿದ ವಿಷಯವನ್ನು ನಿಮ್ಮ ಭಾಷೆ ಮಾತನಾಡುವ ಇತರ ವಿಶ್ವಾಸಿಗಳೊಂದಿಗೆ ಸೇರಿ ಭಾಷಾಂತರ ಕಾರ್ಯವನ್ನು ಮಾಡಿ ಪರಿಶೀಲಿಸಿ ದೃಢಪಡಿಸಿ .(ನೋಡಿ Create Collaborative Translations)
  2. ನಿರಂತರವಾಗಿ ನಡೆಯುವ - ಭಾಷಾಂತರ ಕಾರ್ಯವು ನಿರಂತರವಾಗಿ ನಡೆಯುವ ಪ್ರಕ್ರಿಯೆ, ಎಂದಿಗೂ ಮುಗಿಯುವುದಿಲ್ಲ. ಭಾಷೆ ಮತ್ತು ಭಾಷಾಂತರದಲ್ಲಿ ವಿಶೇಷ ಕೌಶಲ ಹೊಂದಿರುವ ಜನರು ಭಾಷಾಂತರವಾಗಿರುವ ವಿಷಯವನ್ನು ಪರಿಶೀಲಿಸಿ ಅದನ್ನು ಉತ್ತಮಪಡಿಸಲು ಸಲಹೆನೀಡುವುದಾದರೆ ಅವನನ್ನು ಪ್ರೋತ್ಸಾಹಿಸಿ ಸಲಹೆ ಪಡೆಯಬಹುದು. ಭಾಷಾಂತರದಲ್ಲಿ ಕಂಡುಬರುವ ತಪ್ಪುಗಳನ್ನು ಆಗಿಂದಾಗ್ಗೆ ತಿದ್ದುಪಡಿ ಮಾಡಬೇಕು. ಆಗಾಗ ನಡೆಯುವ ಭಾಷಾಂತರದ ಪುನರ್ ಪರಿಶಿಲನೆಯನ್ನು ಉತ್ತೇಜಿಸುವುದಲ್ಲದೆ ಭಾಷಾಂತರ ಪುನರ್ ಕಾರ್ಯ ಅಥವಾ ಹೊಸ ಭಾಷಾಂತರ ಮಾಡಬೇಕಾದ ಪರಿಸ್ಥಿತಿ ಬಂದರೆ ಮುಕ್ತವಾಗಿ ಸ್ವೀಕರಿಸಿ ಮಾಡಬೇಕು. ಭಾಷಾ ಸಮುದಾಯದವರು ಭಾಷಾಂತರ ತಂಡವನ್ನು ರಚಿಸಿ ನಿರಂತರವಾಗಿ ನಡೆಯುತ್ತಿರುವ ಭಾಷಾಂತರ ಕಾರ್ಯದ ಮೇಲ್ವಿಚಾರಣೆ ಮಾಡಲು ನಾವು ಶಿಫಾರಸ್ಸು ಮಾಡುತ್ತೇವೆ. ಪದ ಅನಾವರಣ ಆನ್ ಲೈನ್ ಸಾಧನಗಳನ್ನು ಬಳಸಿ ಭಾಷಾಂತರದಲ್ಲಿ ನಡೆಯುವ ಈ ಬದಲಾವಣೆಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಮಾಡಬಹುದು. (ನೋಡಿ Create Ongoing Translations).

ಮುಕ್ತ ಪರವಾನಗಿ.

This section answers the following question: ಪ್ರಕಟವಾಗಿರುವ ಪದಗಳಿಂದ ಕೂಡಿದ ವಿಷಯಗಳನ್ನು ಬಳಸುವವರಿಗೆ ಯಾವ ಸ್ವಾತಂತ್ರ್ಯವಿದೆ?

ಸ್ವಾತಂತ್ರ್ಯವಾಗಿ ಕಾರ್ಯಮಾಡಲು ಪರವಾನಗಿ ಹೊಂದುವುದು.

ಪ್ರತಿಯೊಂದು ಭಾಷೆಯಲ್ಲೂ ನಿರ್ಬಂಧವಿಲ್ಲದ ಸತ್ಯವೇದದ ವಿಷಯವನ್ನು ಅಳವಡಿಸಿ ಸಾಧಿಸಲು ಜಾಗತಿಕ ಮಟ್ಟದಲ್ಲಿ ಸಭೆ ನೀಡುವ ಪರವಾನಗಿಯ ಅವಶ್ಯಕತೆ ಇದೆ. “ಇದು ನಿರ್ಬಂಧರಹಿತ“ ಪ್ರವೇಶ. ಚರ್ಚ್ ಇಂತಹ ನಿರ್ಬಂಧರಹಿತ ಅಪ್ಪಣೆ ನೀಡಿದರೆ ಈ ಕಾರ್ಯ ಯಾವುದೇ ತಡೆ ಇಲ್ಲದೆ ಸುಲಭವಾಗಿ ಮುಂದುವರೆಯುತ್ತದೆ ಎಂಬ ನಂಬಿಕೆ ನಮಗಿದೆ. The Creative Commons Attribution-ShareAlike 4.0 International License) ಭಾಷಾಂತರ ಮಾಡಲು ಬೇಕಾಗಿರುವ ಎಲ್ಲ ರೀತಿಯ ಹಕ್ಕುಗಳನ್ನು ಒದಗಿಸುತ್ತದೆ ಮತ್ತು ಸತ್ಯವೇದದ ವಿಷಯಗಳನ್ನು ಹಂಚುವಿಕೆ ಮತ್ತು ವಿಷಯವನ್ನು ಬಳಸಿಕೊಳ್ಳಲು ಮುಕ್ತವಾಗಿರುವಂತೆ ಇಡಲು ನಿಶ್ಚಿತಗೊಳಿಸುತ್ತದೆ. ಕೆಲವಾರು ವಿಷಯಗಳನ್ನು ಹೊರತುಪಡಿಸಿ CC BY-SA ಯಿಂದ ಪರವಾನಗಿ ಪಡೆದ ನಮ್ಮ ಎಲ್ಲಾ ವಿಷಯಗಳು ಸುರಕ್ಷಿತವಾಗಿವೆ.

Door43 ನ ಅಧಿಕೃತ ಪರವಾನಗಿಯು ಲಿಂಕ್ ನಲ್ಲಿ ದೊರೆಯುತ್ತದೆ. at https://door43.org/en/legal/license.

Creative Commons Attribution-ShareAlike 4.0 International (CC BY-SA 4.0)

ಇದು ಪ್ರತಿಯೊಬ್ಬರೂ ಓದಬಹುದಾದ ಸಾರಾಂಶ the license.

ನೀವು ಮುಕ್ತವಾಗಿ ಈ ಕೆಳಗೆ ಕೊಟ್ಟಿರುವವುಗಳನ್ನು ಮಾಡಲು ಅವಕಾಶವಿದೆ.

  • ಹಂಚಿಕೊಳ್ಳುವುದು — ಯಾವ ಮಾಧ್ಯಮದಲ್ಲಾದರೂ , ರೂಪದಲ್ಲಾದರೂ ಪ್ರತಿಮಾಡಿ – ಮರುಬಳಕೆ , ಹಾಗೂ ಹಂಚಲು ಉಪಯೋಗಿಸಿಕೊಳ್ಳಬಹುದು.
  • ಅಳವಡಿಸಿಕೊಳ್ಳಲು —ಪುನರ್ ಮಿಶ್ರಣ, ಪರಿವರ್ತಿಸಲು ಮತ್ತು ವಿಷಯವನ್ನು ಅಭಿವೃದ್ಧಿಪಡಿಸಲು ಅವಕಾಶವಿದೆ. ಮತ್ತು ಇತರ ಯಾವುದೇ ಉದ್ಧೇಶಕ್ಕಾಗಲೀ , ವ್ಯಾವಹಾರಿಕ ಉದ್ದೇಶಕ್ಕಾಗಲೀ ಬಳಸಿಕೊಳ್ಳಬಹುದು. ಪರವಾನಗಿಯಲ್ಲಿರುವ ಕರಾರುಗಳನ್ನು ಸರಿಯಾಗಿ ಪಾಲಿಸುವವರೆಗೆ ಪರವಾನಗಿ ಪಡೆದವರು ಯಾವುದೇ ಆಕ್ಷೇಪಣೆ ಮಾಡುವಂತಿಲ್ಲ.

ಕೆಳಗಿನ ಕರಾರುಗಳನ್ನು ಅನುಸರಿಸುವಂತೆ:

  • ಇರುವ ಅಧಿಕಾರ —ನೀವು ಸೂಕ್ತವಾದ ಶ್ರದ್ಧೆಯನ್ನು ನೀಡಬೇಕು , ಪರವಾನಗಿಗೆ ಬೇಕಾದ ಲಿಂಕ್ ಅನ್ನು ಒದಗಿಸಬೇಕು , ಬದಲಾವಣೆ ಏನಾದರೂ ಮಾಡಿದರೆ ಅದನ್ನು ಸೂಚಿಸಬೇಕು. ನೀವು ಇದನ್ನು ಸಕಾರಣವಾದ ಎಲ್ಲಾ ಸಂದರ್ಭದಲ್ಲೂ ಮಾಡಬಹುದು ಆದರೆ ಪರವಾನಗಿ ಪಡೆದವರು ನಿಮ್ಮ ಬಳಕೆಯನ್ನು ದೃಢಪಡಿಸಲು ಯಾವುದೇ ರೀತಿಯಿಂದ ಸಲಹೆ ನೀಡಲಾಗುವುದಿಲ್ಲ.
  • ಸದೃಶ್ಯವಾದುದನ್ನು ಹಂಚಿಕೊಳ್ಳುವುದು — ನೀವೇನಾದರು ಇದನ್ನು ಪುನರ್ ಮಿಶ್ರಣ ಮಾಡಿದರೆ , ಪರಿವರ್ತಿಸಿದರೆ ಅಥವಾ ಈ ವಿಷಯವನ್ನು ಅಭಿವೃದ್ಧಿಪಡಿಸಿದರೆ ಇದೇ ಪರವಾನಗಿಯನ್ನು ಬಳಸಿ ಮೂಲ ವಿಷಯದೊಂದಿಗೆ ನಿಮ್ಮ ವಿಚಾರವನ್ನು ಸೇರಿಸಿಬಳಸಬಹುದು , ವಿತರಿಸಬಹುದು.
  • ಬೇರೆ ಹೆಚ್ಚಿನ ನಿರ್ಬಂಧಗಳು ಇಲ್ಲ - ನೀವು ನ್ಯಾಯಯುತವಾದ ಯಾವುದೇ ವಿಚಾರಗಳು , ತಾಂತ್ರಿಕ ತತ್ವಗಳು ಪರವನಾಗಿ ಅನುಮತಿಸುವ ನ್ಯಾಬದ್ಧವಾದ ವಿಚಾರಗಳನ್ನು ನಿರ್ಬಂಧಿಸಬಾರದು.

####ತಿಳಿವಳಿಕೆಗಳು :

ಸಾರ್ವಜನಿಕ ಕ್ಷೇತ್ರದಲ್ಲಿರುವ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪರವಾನಗಿಯ ಅಂಶಗಳಿಗೆ ವಿದೇಯರಾಗಿ ನಡೆದುಕೊಳ್ಳಬೇಕೆಂಬ ಕಡ್ಡಾಯವಿಲ್ಲ , ನೀವು ಬಳಸುವಂತಹ ಎಲ್ಲಾ ಪದಗಳಿಗೆ , ವಿಷಯಗಳಿಗೆ ಅನ್ವಯಿಸುವ ವಿನಾಯಿತಿಗಳು ಮತ್ತು ಮಿತಿಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಯಾವುದೇ ಖಾತರಿ ನೀಡಲಾಗುವುದಿಲ್ಲ

ನೀವು ನಿರೀಕ್ಷಿಸುವ ಎಲ್ಲಾ ಅನುಮತಿಗಳನ್ನು ಈ ಪರವಾನಗಿ ನೀಡುವುದಿಲ್ಲ. ಉದಾಹರಣೆಗೆ ಇತರ ಹಕ್ಕುಗಳಾದ ಪ್ರಚಾರ, ಖಾಸಗಿತನ, ನೈತಿಕ ಹಕ್ಕುಗಳು ಇವುಗಳ ಮಿತಿ ನೀವು ಅವುಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಮೇಲೆ ಆಧಾರವಾಗಿರುತ್ತದೆ. ದೃಢಪಡಿಸಿದ ಕಾರ್ಯಗಳಿಗೆ ಉತ್ಪನ್ನ ಪದಗಳನ್ನು ಬಳಸಲು ನೀಡಿರುವ ಸಲಹೆಗಳು: ಮೂಲಕಾರ್ಯಗಳನ್ನು Door43 ಜಾಗತಿಕ ಮಿಷನ್ ಕಮ್ಯುನಿಟಿಯಿಂದ ಸೃಷ್ಟಿಸಲಾಗಿದೆ , http://door43.org/, and released under a Creative Commons Attribution-ShareAlike 4.0 International License ಇದು (http://creativecommons.org/licenses/by-sa/4.0/ ).ಯಲ್ಲಿ ದೊರೆಯುತ್ತದೆ. ಇದು ಮೂಲ ವಿಷಯದಿಂದ ಬದಲಾಯಿಸಿದೆ ಮತ್ತು ಮೂಲ ಲೇಖಕರು ಈ ಕಾರ್ಯವನ್ನು ದೃಢೀಕರಿಸಿಲ್ಲ.

Door43 ಕೊಡುಗೆ ನೀಡಿದವರ ವಿಶೇಷ ಗುಣಗಳು.

Door43 ಯಲ್ಲಿ ಸಂಪನ್ಮೂಲಗಳನ್ನು ಅಳವಡಿಸುವಾಗ ಮೂಲವಿಷಯಗಳನ್ನು ನಿಶ್ಚಿತ ಹಾಗೂ ನಿಖರವಾದ ಉತ್ಪನ್ನಪದಗಳನ್ನು ಬಳಸುವುದಲ್ಲದೆ ಲಭ್ಯವಿರುವ ಮುಕ್ತ ಪರವಾನಗಿಯಡಿಯಲ್ಲಿ ಬಳಸಬೇಕು. ಉದಾಹರಣೆಗೆ ಮುಕ್ತ ಸತ್ಯವೇದದ ಕತೆಗಳಲ್ಲಿ ಬಳಸಿರುವ ಕಲೆ – ಚಿತ್ರಗಳು ಈ ಯೋಜನೆಯಲ್ಲಿ ಸ್ಪಷ್ಟವಾಗಿ, ಅಧಿಕೃತವಾಗಿ ಬಳಸಿದೆ. main page.

ಅಧಿಕೃತ ವಿಚಾರಗಳು ಸ್ವಯಂಚಾಲಿತವಾಗಿ ಇತಿಹಾಸದ ಪರಿಷ್ಕರಣೆ ಪ್ರತಿಪುಟದಲ್ಲೂ ಸಾಕಷ್ಟು ನಡೆದಿದೆ. Door43 ಯೋಜನೆಗೆ ಈ ಕೊಡುಗೆಗಳನ್ನು ನೀಡಿದೆ Door43ಗೆ ಕೊಡುಗೆ ನೀಡಿದ ಪ್ರತಿಯೊಬ್ಬರನ್ನು ಪಟ್ಟಿಮಾಡಿ "the Door43 World Missions Community" ಅಥವಾ ಪರಿಣಾಮಕ್ಕೆ ಇದನ್ನು ಸೇರಿಸುವುದು. ಪ್ರತಿಯೊಬ್ಬ ಕೊಡುಗೆದಾರನ ಕೊಡುಗೆಯನ್ನು ಇತಿಹಾಸದ ಪರಷ್ಕರಣೆಯಲ್ಲಿ ಸಂರಕ್ಷಿಸಲಾಗಿದೆ.

ಆಕರ ಗ್ರಂಥಗಳು.

ಆಕರ ಗ್ರಂಥಗಳಲ್ಲಿರುವ ಅಂಶಗಳನ್ನು ಬಳಸಲು ಈ ಕೆಳಗೆ ಕೊಟ್ಟಿರುವ ಪರವಾನಗಿಗಳಲ್ಲಿ ಒಂದನ್ನು ಹೊಂದಿರಬೇಕು.

See Copyrights, Licensing, and Source Texts for more information.


ಗೇಟ್ ವೇ ಭಾಷೆಗಳ ಕಾರ್ಯತಂತ್ರಗಳು .

This section answers the following question: ಪ್ರತಿಯೊಂದು ಭಾಷೆಯನ್ನು ಹೇಗೆ ತಲುಪಬಹುದು ?

  • ಈ ದಾಖಲೆಗಳ ಅಧಿಕೃತ ಪ್ರತಿಗಳು at http://ufw.io/gl/.* ಲಿಂಕ್ ನಲ್ಲಿ ಕಾಣಬಹುದುಪಡೆಯಬಹುದು.

ವಿವರಣೆ / ಸ್ಪಷ್ಟೀಕರಣ .

ಗೇಟ್ ವೇ ಭಾಷೆಗಳ ಕಾರ್ಯತಂತ್ರದ ಉದ್ದೇಶ ವಿ ಶೇ. 100% ರಷ್ಟು ಜನರ ಗುಂಪನ್ನು ಒಳಗೊಂಡಂತೆ ಸಿದ್ಧಮಾಡುವುದಾಗಿದೆ. ಇದರೊಂದಿಗೆ . ಜಾಗತಿಕ ಮಟ್ಟದ ಸಭೆಗಳಲ್ಲಿ ಸತ್ಯವೇದದ ವಿಷಯಗಳ ಹಸ್ತಪ್ರತಿ ನಿರ್ಬಂಧಗಳನ್ನು ಬಿಡುಗಡೆ ಮಾಡಿಜನರು ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ ಎಲ್ಲಾ ಭಾಷೆಗಳಲ್ಲಿ ದೊರೆಯುವಂತೆ ಮಾಡಿದೆ. (ಭಾಷೆ ಎಂದರೆ ವಿಸ್ತಾರವಾದ ಸಂಪರ್ಕ ಭಾಷೆ) ಇದರೊಂದಿಗೆ ಅನಿರ್ಬಂಧಿತ ಭಾಷಾಂತರ ತರಬೇತಿ ಮತ್ತು ಭಾಷಾಂತರ ಮಾಡಲು ಅನುಕೂಲವಾಗುವಂತಹ ಸಾಧನಗಳನ್ನು ಬಳಸಿಕೊಂಡು ಜನರಿಗೆ ಅರ್ಥವಾಗುವಂತಹ ಭಾಷೆಯಲ್ಲಿ ಭಾಷಾಂತರವಾಗಬೇಕು.(ಅವರ ಸ್ವಂತ ಭಾಷೆಗಳಲ್ಲಿ)

"ಗೇಟ್ ವೇ ಭಾಷೆ" ವ್ಯಾಪಕವಾದ ಸಂಪರ್ಕ ಹೊಂದಿರುವ ಭಾಷೆಯಾಗಿದ್ದು ಇದರ ಮೂಲಕ ಆ ಭಾಷೆಯ ದ್ವಿತೀಯ ಭಾಷೆಯನ್ನು ಮಾತನಾಡುವವರು, ವಿಷಯವನ್ನು ಸ್ವಾದೀನಪಡಿಸಿಕೊಳ್ಳಲು ಮತ್ತು ಅವರ ಭಾಷೆಗೆ ಅದನ್ನು ಭಾಷಾಂತರಿಸಲು ಸಮರ್ಥರಾಗುತ್ತಾರೆ. "ಗೇಟ್ ವೇ ಭಾಷೆ" ಜಾಗತಿಕ ಮಟ್ಟದಲ್ಲಿನ ಅಲ್ಪಸಂಖ್ಯೆಯ ಭಾಷೆಯನ್ನು ಒಳಗೊಂಡಿದ್ದು ದ್ವಿಭಾಷಿ ಅನುವಾದಕರ ಮೂಲಕ ವಿಷಯವನ್ನು ಇತರ ಪ್ರತಿಯೊಂದು ಭಾಷೆಗೆ ಭಾಷಾಂತರವನ್ನು ಮಾಡಲಾಗುವುದು

ಉದಾಹರಣೆಗೆ ಗೇಟ್ ವೇ ಭಾಷೆಯಲ್ಲಿನ ಫ್ರೆಂಚ್ ಭಾಷೆಯ ಫ್ರಾಂಕೋಫೋನ್ ಆಫ್ರಿಕಾದ ಅಲ್ಪಸಂಖ್ಯಾತ ಭಾಷೆ . ಫ್ರೆಂಚ್ ಭಾಷೆಗೆ ದ್ವಿಭಾಷೆ ಮಾತನಾಡುವವರಿಂದ ಫ್ರೆಂಚ್ ಮಾತನಾಡುವರ ಸ್ವಂತ ಭಾಷಿಕರಿಗೆ ಅನುಕೂಲವಾಗುವಂತೆ ಭಾಷಾಂತರ ಮಾಡಬೇಕು. ರಾಷ್ಟ್ರೀಯ ಮಟ್ಟದಲ್ಲಿ ಗೇಟ್ ವೇ ಭಾಷೆಯ ಸೂಚಿತ ದೇಶದ ಕೆಲವೇ ಭಾಷೆಗಳನ್ನು ವಿಸ್ತಾರವಾದ ಸಂಪರ್ಕಕ್ಕೆ ಬೇಕಾದ ಕೆಲವು ಭಾಷೆಗಳಾಗಿವೆ. ಇದರ ಮೂಲಕ. ಇದು ಅಲ್ಪಸಂಖ್ಯಾತ ಭಾಷೆಯಲ್ಲಿ ದ್ವಿಭಾಷೆ ಮಾತನಾಡುವವರಿಗೆ ಅಗತ್ಯವಿದ್ದು, ದೇಶೀಯ ಭಾಷೆಯ ಕುರಿತಾದ ವಿಷಯವನ್ನು ಪಡೆಯಲು ಇದು ಸಹಕಾರಿಯಾಗಿರುತ್ತದೆ.(ಕೆಲವೊಮ್ಮೆ ಇಂತವರು ವಲಸೆಯಿಂದ ಸಿಗದೆ ಹೋಗಬಹುದು.)

ಉದಾಹರಣೆಗೆ ಇಂಗ್ಲೀಷ್ ಭಾಷೆ ಉತ್ತರ ಕೊರಿಯಾ ಭಾಷೆಗೆ ಗೇಟ್ ವೇ ಭಾಷೆಯಾಗಿದೆ. ಉತ್ತರಕೊರಿಯಾ ದೇಶೀಯ ಗುಂಪಿನ ಜನರಿಗೆ ಸುಲಭವಾಗಿ ಅರ್ಥವಾಗುವಂತೆ, ವಿಷಯ ಸ್ಪಷ್ಟವಾಗಿ ತಿಳಿದುಕೊಳ್ಳಲು ಅನುಕೂಲವಾಗುವಂತೆ ಇಂಗ್ಲೀಷ್ ಭಾಷೆಯಿಂದ ಭಾಷಾಂತರಿಸಬೇಕು.

ಪರಿಣಾಮಗಳು.

ಈ ಮಾದರಿಯಲ್ಲಿ ಎರಡು ರೀತಿಯಾದ ಮೂಲಭೂತ ಪರಿಣಾಮಗಳಿವೆ : ಮೊದಲನೆಯದು ಇದು ಎಲ್ಲಾ ಭಾಷೆಗಳನ್ನು ವಿಷಯದ ಕಡೆಗೆ ಅವರವರ ಭಾಷೆಯಲ್ಲಿ ತಿಳಿದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಭಾಷೆಯ ಅಭಿವೃದ್ಧಿಗೆ ಬೇಕಾದುದನ್ನು ಪಡೆಯಲು ವಿಶೇಷ ಒತ್ತು ನೀಡಿ ಪ್ರತಿಯೊಂದು ಭಾಷೆಯ ಪದಗಳನ್ನು ಪಡೆಯಬೇಕು (ಗೇಟ್ ವೇ ಭಾಷೆಯಿಂದ)

ಎರಡನೆಯದಾಗಿ, ಇದು ಭಾಷಾಂತರವಾಗುವ ಕಾರ್ಯವನ್ನು ಮಿತಿಗೊಳಿಸುತ್ತದೆ. ಏಕೆಂದರೆ ಗೇಟ್ ವೇ ಭಾಷೆಯಿಂದ ಆಗುತ್ತಿರುವ ಭಾಷಾಂತರಗಳು ಇದಕ್ಕೆ ಸಹಾಯಮಾಡುವುದಲ್ಲದೆ, ಭಾಷಾಂತರ ಸುಗಮವಾಗಿ ಆಗುವಂತೆ ನೋಡಿಕೊಳ್ಳಬೇಕು. ಅನುವಾದವನ್ನು ಅರ್ಥಮಾಡಿಕೊಳ್ಳಲು ಯಾವುದೇ ಭಾಷೆ ಭಾಷಾಂತರದ ಸಹಾಯಕ ಪ್ರತಿಗಳನ್ನು ಅವಲಂಭನೆ ಮಾಡದೆ ಇರುವ ಕಾರಣದಿಂದ ಇತರ ಎಲ್ಲಾ ಭಾಷೆಗಳು ಸತ್ಯವೇದದ ವಿಷಯವನ್ನು ಭಾಷಾಂತರ ಮಾಡುತ್ತದೆ.


ಉತ್ತರಗಳನ್ನು ಹುಡುಕುವುದು.

This section answers the following question: ನನ್ನ ಪ್ರಶ್ನೆಗಳಿಗೆ ಉತ್ತರವನ್ನು ನಾನು ಎಲ್ಲಿ ಪಡೆಯಬಹುದು ?

ಉತ್ತರವನ್ನು ಹೇಗೆ ಪಡೆಯಬಹುದು.

ಪ್ರಶ್ನೆಗಳಿಗೆ ಉತ್ತರವನ್ನು ಲಭ್ಯವಿರುವ ಅನೇಕ ಮೂಲಗಳಿಂದ ಪಡೆಯಲು ಸಾಧ್ಯವಿದೆ.

  • ಭಾಷಾಂತರ ಅಕಾಡೆಮಿ – ಕೈಪಿಡಿ http://ufw.io/ta ಇದರಲ್ಲಿ ಲಭ್ಯವಿದ್ದು ಇದರಲ್ಲಿ ಅನೇಕ ಮಾಹಿತಿಗಳು ದೊರೆಯುತ್ತದೆ.
    • ಪೀಠಿಕೆ - ಅನಾವರಣಗೊಂಡ ಪದ ಯೋಜನೆಯನ್ನು ಪರಿಚಯಿಸುತ್ತದೆ.
    • ಕೈಪಿಡಿ ಪ್ರಕ್ರಿಯೆ – ಮುಂದಿನದು ಏನು ಎಂಬುದನ್ನು ಪ್ರಶ್ನೆಗಳಿಗೆ ಉತ್ತರಿಸುತ್ತದೆ.
    • ಭಾಷಾಂತರ ಕೈಪಿಡಿ – ಇದರಲ್ಲಿ ಮೂಲಭೂತ ಸಿದ್ಧಾಂತಗಳನ್ನು ಸ್ಪಷ್ಟವಾಗಿ ವಿವರಿಸುತ್ತದೆ ಮತ್ತು ಪ್ರಾಯೋಗಿಕ ಭಾಷಾಂತರಕ್ಕೆ ಸಹಾಯ ನೀಡುತ್ತದೆ.
    • ಪರಿಶೀಲನಾ ಕೈಪಿಡಿ – ಪರಿಶೀಲನೆಗೆ ಬೇಕಾದ ಮೂಲಭೂತ ಸಿದ್ಧಾಂತ ಮತ್ತು ಉತ್ತಮ ಪದ್ಧತಿ ಬಗ್ಗೆ ತಿಳಿಸುತ್ತದೆ.

ನಿಮ್ಮ ಪ್ರಶ್ನೆಗಳನ್ನು helpdesk ಗೆ ಕಳುಹಿಸಿ ನಿಮ್ಮ ಪ್ರಶ್ನೆಗಳಿಗೆ ನಿಜವಾದ ಉತ್ತರವನ್ನು ಈ ಲಿಂಕ್ ಮೂಲಕ "#helpdesk" (sign up at http:// ufw.io/ team43) ಪಡೆಯಿರಿ. ನಿಮ್ಮ ಪ್ರಶ್ನೆಗಳಿಗೆ ಸಹಾಯಕ