2 1 ಅಣ್ಣ -ತಮ್ಮಂದಿರೇ ನಂಗ ಸುಮ್ಮ ಸುಮ್ಮನೆ ನಿಂಗತಣ ಬರದ್ ಇರದ್ರ ನಿಂಗಗ್ ತ್ ಲ್ದತರ 2 ನಂಗಗ್ ಪಿಲಿಪ್ಪಿ ಉರ್ ಗ್ ಕಷ್ಟ ಅವಮಾನ ಮೊದ್ಲ್ ಬರದ್ ನಂಗ ದೈವನಯಿಂದ ದೈರ್ಯ ಆಗಿ ಬಾಳ ಹಗೆನೆ ಅನಭವಸವರಾಗಿ ನಿಂಗಗ್ ದೈವನ ಸುದ್ದಿನೆ ತಳಿಸಿದಿಗೆ ಅಂದ್ ನಿಂಗಗೆವೆ ಗೊತ್ತು 3 ಯಾನಗಂದಲೆ ನಂಗ ಕಲ್ಸದ್ಲ್ ಕ್ಯಟ್ಟದ್ ಸೇರಿದದಲ್ಲ ಮ್ವೊಸಮಾಡಲೇ ಅಲ್ಲ ದೈವ ನಂಗನೆ 4 ವಳ್ಳೆ ವರಂದ್ ದೈವನ ಸುದ್ದಿನೆ ನಂಗ ತನಗ್ ಒಪ್ಸಿನಲ್ಲಿ ಅಂದ್ ಗ್ಯಾನ ಮಾಡವರಾಗಿ ಮೈಸರ್ನೆ ಮೆಚ್ಚಿಸದ್ಗ್ ಗುರುಭಲ್ನೆ ಪರೀಕ್ಷೆ ಮಾಡ ದೈವನೆ ಮೆಚ್ಚಿಸಕಂದ್ ಮಾತಾಡಿತಿಗೆ 5 ನಿಂಗಗ್ ತಲ್ದ್ ತರ ನಂಗ ಎಂದ್ಗ್ ಮ್ವೊಖ ಸೋತ್ರನೆ ಮಾಡವರಾಗಿ ಕಂಡ್ ಬಂದಲೆ ದುಡ್ದುನ ಆಸೆನೆ ಮರೆಮಾಡದ್ಗ್ ರೂಪಹಾಕಿದವರಲ್ಲ ಇದ್ಗ್ ದೈವವೇ ಸಾಕ್ಷಿ 6 ಇದಲ್ಲದೆ ನಂಗ ದೈವನ ಅಪೋಸ್ತಲರಾಗಿರಯಿಂದ ನಂಗಗ್ ಗೌರವನೆ ಕ್ವದಕಂಡ್ ಹ್ ಳ್ಯೋದ್ ಇದ್ದರ್ ಮೈಸನಯಿಂದ ಬರ ಮಾನನೆ ನಿಂಗಯಿಂದ ಆಗಲಿ ಬೇರ್ಯವರಿಂದಾಗಲಿ ನಂಗ ಬಯಸದಿಲ್ಲೆ 7 ಅವ್ವ ತನ್ನ ಮಕ್ಕನೆ ಸಾಕಿಸಲಗಂತೆ ನಂಗ ನಿಂಗ ಮೆದ್ಯಲ್ ವಳ್ಳೆದ್ ಇಂದ ನಡ್ದೊದ್ದಿದ್ 8 ನಿಂಗ ನಂಗಗ್ ದೊಡ್ಡ ಸ್ನೇಹ ಆಗಿರಯಿಂದ ನಂಗ ನಿಂಗಲ್ ಪ್ರೀತಿ ಇರವರಾಗಿ ದೈವ ಸುವಾರ್ತೆನೆ ಹಾಳದ್ಗ್ ನಿಂಗಗಾಗಿ ಜಿಂವನೆವೆ ಕ್ವಡ ದ್ಗ್ ಸಂತೋಸ ಪಟ್ಟವರಾಗಿದಿಗೆ 9 ಅಣ್ಣ-ತಮ್ಮಂದಿರೇ ನಂಗ ನಿಂಗಲ್ ಯಾರ್ ಮೇಲೆ ಬಾರಹಾಕಬಾರಂದ್ ಅಗರ್ ಸರಿದೆ ದುಡ್ಡ್ ಜಿಂವನಮಾದ್ಯೋದ್ ದೈವನ ಸುವಾರ್ತೆನ ನಿಂಗಗ್ ಸಾರಿದಿಗೆ ಆಗ ನಂಗ ಕಷ್ಟನೆ ಪ್ರಯಾಸನೆ ನಿಂಗ ಗ್ಯಾನಲ್ ಇದ್ದೆದೆ ಅಷ್ಟೆ 10 ನಂಬವರಾದ ನಿಂಗ ವಿಷಯಲ್ ನಂಗ ಯಾಸೋ ವಳ್ಳೆವರಾಗಿ ನಡ್ದೊಡಿದ್ದಿ ಅಂಬದ್ಗ್ ನಂಗವೆ ಸಾಕ್ಷಿಯಿಂದ ದೈವ ಸಾಕ್ಷಿ 11 ಅಪ್ಪಾ ತನ್ನ ಮಕ್ಕಗ್ ಯಂಗೋ ಹಾಂಗೆವೆ ನಂಗ ನಿಂಗಲ್ ಯಲ್ಲರ್ಗ್ ಬುದ್ದಿ ಹೇಳ್ಯೋಡ್ 12 ದೈರ್ಯಪದಿಸ್ಯೋಡ್ ತನ್ನ ರಾಜ್ಯ ಪ್ರಭಾವಲ್ ಪಾಲ್ಗಾರರಾಗದ್ಗ್ ಕರ್ಯ ದೈವಗ್ ವಳ್ಳೆವರಾಗಿ ನಿಂಗ ನಡೆಕಂದ್ ನಿಜಾಗಿ ಹ್ ಳ್ಯೋದ್ ಇದ್ದಿಗೆ ಅಂಬದ್ನೆ ತ್ ಲ್ದದೆದೆ 13 ಈಗ ನಿಂಗ ದೈವನ ವಾಕ್ಯನೆ ನಿಂಗಯಿಂದ ಕಳಿದಗ ಅದ್ನೆ ಮೈಸನ ವಾಕ್ಯಂದ್ ಹಾಳದೆ ದೈವನ ವಾಕ್ಯಂದ್ ತಲ್ದ್ ನಡ್ದೊಡ್ ನಂಗ ಯಾಗ್ಲ್ ದೈವನ ಕೊಂಡಾದಿತಿಗೆ ಅದ್ ನಿಜಾಗಿ ದೈವನ ವಾಕ್ಯವೇ ಅದ್ ನಂಬದರಾದ ನಿಂಗವಳಗೆ ಬಲಾಗಿ ಕ್ಯಲ್ಸ ನಡಿಸಿತೆದೆ 14 ಅಣ್ಣ ತಮ್ಮಂದಿರೇ ನಿಂಗ ಯೂದಾಯಲ್ ಕ್ರಿಸ್ತ್ ಯೇಸ್ ಲಿರ ದೈವನ ಸಭೆನೆ ನಡ್ಸವರಾಗಿದೆರ್ ಅವರ್ ಯೆಹೂದ್ಯ ಇಂದ ಅನಭವಿಸಿದ ಕಷ್ಟನೆ ನಿಂಗ ಸ್ವಂತ ದೇಸನೆ ಅನ್ ಭವಿಸಿದೆರ್ 15 ಆ ಯೆಹೂದ್ಯರ್ ಕರ್ತ ಆಗಿರ ದೈವನೆ ಪ್ರಾವಾಧಿನೆ ಕ್ವಂದರ್ ನಂಗನೆ ಹೋಡ್ಸಿ ಬುಟ್ಟರ್ ಅವರ್ ದೈವನೆ ಮೆಚ್ಚಿಸವರಲ್ಲ ಯಲ್ಲ ಮೈಸರ್ಗ್ ಹಗೆಗಾರರಾಗಿದೆರೆ 16 ಅನ್ಯ ಜನ್ಹಗ್ ರಕ್ಷಣೆ ಆಗಂತೆ ಸುವಾರ್ತೆನೆ ಆಳಾಗ ನಂಗಗ್ ಅಡ್ಡಿ ಮಾಡಿತೆರೆ ಹಿಂಗೆ ತಂಗ ಪಾಪದ ನಡ್ತೇನೆ ಯಲ್ಲ ಕಾಲಲ್ ಪೂರ್ತಿ ಮಾಡಲೆ ಹೋತೆರೆ ಅಂದಲೆ ದೈವನ ಕ್ವಾಪ ಅವರ್ ಮೇಲೆ ಪೂರ್ತಿ ಆಗ್ಯೋಡ್ ಬಂತ 17 ಅಣ್ಣ-ತಮ್ಮಂದಿರೇ ನಂಗಂತ ಥಡಿಲ್ ಮಾತ್ರ ನಿಂಗನೆ ಸ್ವಲ್ಪಕಾಲ ಅಗಲಿದಲೆ ಗುರುಭಲ್ ಅಗಲದೆ ನಿಂಗ ಮ್ವೋಖನೆ ನ್ವೋಡಲೇ ಬಾಳ ಆಸೆಯಿಂದ ಪರ್ದಡ್ಯೋದ್ ಇದ್ದಿಗೆ 18 ಯಾನ್ಗಂದಲೇ ನಿಂಗ ತನಗ್ ಬರಲೆ ನಂಗಗ್ ಮನಸಿತ್ತ್ ಪೌಲ ಅಂಬ ನಾ ಒಂದೆರೆಡ್ ಸಲ ಬರಲಿದ್ದಿ ಅಂದಲೇ ಪಿಶಾಸಿ ನಂಗಗ್ ತಡೆ ಮಾಡಿನ 19 ನಂಗ ಕರ್ತರ್ ಆಗಿರ ಯೇಸ್ ಅವನ ಮುಂದಕ್ ನಂಗ ಮಾತ್ ಕ್ವಡ ಸಂತಪಸ ನಂಗ ವಳಗ ಜಯಮಾಲೆ ಯಾರ/ 20 ನಿಂಗವೇ ತಲ್ಲ ನಿಜ ಆಗಿ ನಿಂಗವೇ ನಂಗ ಗೌರವ ಸಂತೋಸ ಆಗಿದಿರ್